Leeladhar KR
4/17/2023
ತುಂತುರು ಒಂಚೂರು ಮಳೆ ಹನಿಯ ಇಳಿಜಾರು|Tunturu Onchuru |Leeladhar KR | #kannada #mungarumale #kannadasong
Tunturu Onchuru Male Haniya Ilijaaru is a single to enjoy the feelings of love in the rain. Hope you will all like this song.  
 
Singer, Music, lyrics - Leeladhar KR  
Photos : Bindu  
 
Lyrics :  
ತುಂತುರು ಒಂಚೂರು  
ಮಳೆಹನಿಯ ಇಳಿಜಾರು|  
ಮೆಲ್ಲನೆ ಮೆಲುಕಿದೆ ಒಡಲನು ಕಲುಕಿದೆ  
ಒಲವಿನ ಮದವೇರಿ|  
ತಂಪಿನ ತಳರಿಗೆ ಮಂಪುರು ಮೆತ್ತಿದ  
ಮುತ್ತಿನ ವೈಯ್ಯಾರಿ||  
ಮೆಲ್ಲನೆ ಮೆಲುಕಿದೆ ಒಡಲನು ಕಲುಕಿದೆ  
ಒಲವಿನ ಮದವೇರಿ|  
ತಂಪಿನ ತಳಿರಿಗೆ ಮಂಪರು ಮೆತ್ತಿದ  
ಮುತ್ತಿನ ವೈಯ್ಯಾರಿ ||  
ತಗೆದಿದೆ ಚೂರು ಒಳಗಿನ ದೂರು  
ಚಡಪಡಿಕೆ ಇನ್ನು ಬಲು ಜೋರು |  
ಮುಸುಕಿನ ಬದಲು ಹೊಸತನ ಮಜಲು  
ಕಾತುರಕೇನೋ ತಕರಾರು ||  
ಕಡಿದಾದ ನವಿರಾದ  
ನಲಿವೊಂದು ಸುಳಿದಾಗ ||  
ನಿಲುಕದು ಈಗ ನಿರ್ಣಯ ತನಕ ಸೆಳೆತದ ಈ ವೇಗ ||  
ಕದಡದೆ ಬಂದು ಕಾದಡೆ  
ಮರೆಯದೆ ನನ್ನ ಬಳಿ ಬಾರೆ  
ಕುಂತರು ನಿಂತರು ನಿನ್ನ ಧಾರೆ  
ಧುಮಕಿದೆ ಮನಸಾರೆ |  
ಕದಡದೆ ಬಂದು ಕಾದಡೆ  
ಮರೆಯದೆ ನನ್ನ ಬಳಿ ಬಾರೆ  
ಕುಂತರು ನಿಂತರು ನಿನ್ನ ಧಾರೆ  
ಧುಮಕಿದೆ ಮನಸಾರೆ |  
 
ಮಂಜಿನ ಪಥದಲ್ಲಿ ಮುತ್ತಿನ ಮೆರವಣಿಗೆ  
ಮುಂದಿನ ದಿನದಲ್ಲಿ ನಲಿವಿನ ಸಿಂಪಡಿಕೆ ||  
ಬಾ ನಲ್ಲೆ ಮುನ್ನೆಲೆಗೆ , ಬದುಕಿನ ಬಣ್ಣದ ಬವಣೆಗೆ  
ಬಾನಂಗಳ ಚೀರುನಗೆಗೆ ನಿನ್ನದೇ ಬರೆವಣಿಗೆ ||  
ಬಾ ನಲ್ಲೆ ನನ್ನೆಡೆಗೆ ಬಿಂಬಿತವಾಗಿದೆ ನವ ನಡಿಗೆ  
ಕೂಗಾಡಿವೆ ನವ ಘಳಿಗೆ ನಿನ್ನಯ ಕಿರು ನಗೆಗೆ ||  
ತಂಗಾಳಿಯ ಸರಣಿಗೆ ಸಂಚಿಕೆಯಾಗಿದೆ ನಿನ್ನ ಗಾದೆ  
ಸುಮಧುರವಾದ ಮುಸ್ಸಂಜೆ  
ಮಿಲನಕೆ ಇನ್ನ ಮುನ್ನುಡಿಯನ್ನ ಬರೆದೆದಿ ಬಾ ಚಿನ್ನ  
ಮಿಲನಕೆ ಇನ್ನ ಮುನ್ನುಡಿಯನ್ನ ಬರೆದೆದಿ ಬಾ ಚಿನ್ನ  
ಆ.. ಆ.. ಆ..  
 
ತುಂತುರು ಒಂಚೂರು  
ಮಳೆಹನಿಯ ಇಳಿಜಾರು|  
ಮೆಲ್ಲನೆ ಮೆಲುಕಿದೆ ಒಡಲನು ಕಲುಕಿದೆ  
ಒಲವಿನ ಮದವೇರಿ|  
ತಂಪಿನ ತಳರಿಗೆ ಮಂಪುರು ಮೆತ್ತಿದ  
ಮುತ್ತಿನ ವೈಯ್ಯಾರಿ||
🚀
🔔

DOT RED website with chillies.red domain is available on sale. Learn More, buy from Afternic  or offer at Sedo 

🔍
🗨️